೨೨ ಮೇ ೨೦೧೧ ರವಿವಾರ "ನಂಗೆ ಇಷ್ಟಾನೋ" ವಿಶ್ವೇಶ್ವರ ಭಟ್ಟರ ಅಂಕಣದಲ್ಲಿ "Brilliant ಉತ್ತರ ಬರೆದರೂ ಹೀಗಾ ?" ಎಂಬ ಶೀರ್ಷಿಕೆ ಅಡಿಯಲ್ಲಿ ಕೇಳಿದ ಕೆಲ ಪ್ರಶ್ನೆ ಹಾಗೂ ಉತ್ತರ ಹೀಗಿದೆ.
ಪ್ರಶ್ನೆ : ಟಿಪ್ಪು ಸುಲ್ತಾನ ಯಾವ ಕಾಳಗದಲ್ಲಿ ಮಡಿದ ?
ಉತ್ತರ: ಕೊನೆ ಕಾಳಗದಲ್ಲಿ
ಪ್ರಶ್ನೆ : ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ್ದು ಎಲ್ಲಿ ?
ಉತ್ತರ: ಕಾಗದ ಕೊನೆಯಲ್ಲಿ
ಇಲ್ಲಿ ಏನೋ ಭಟ್ಟರು ಎತ್ತಿ ತೋರಿಸಿ ಹಾಸ್ಯ ಮಾಡಿದ್ದಾರೆ. ಕೆಲ ಸಂಕೀರ್ಣ ಪ್ರಶ್ನೆಗಳಿಗೆ ಹೀಗೆ ಸರಿಯಾಗಿ ಕಾಣುವ ಆದರೆ ಅನ್ವಯವಾಗದ ಉತ್ತರಗಳನ್ನು ಬೇರ್ಪಡಿಸುವದು ಸರಳವಾಗಿರುವದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ನಿಜ ಜೀವನದಲ್ಲಿ ಕೆಲವರು ಈ ತರಹ ಉತ್ತರ ಸರಿಯಾಗಿದ್ದರೂ ಸಂದರ್ಭಕ್ಕೆ, ಸನ್ನಿವೇಶಕ್ಕೆಅನ್ವಯವಾಗದ ಉತ್ತರಗಳನ್ನು ಕೊಟ್ಟು ಅನೇಕರಿಂದ ಸೈ ಅಥವಾ Brilliant ಅಂತ ಕೂಡ ಅನ್ನಿಸಿಕೊನ್ದುಬಿಡ್ತಾರೆ. ಈ ತರಹ ಉತ್ತರ ಕೊಡುವರನ್ನು ಮುಗ್ಧ ಎನ್ನಬೇಕೋ ಅಥವಾ ಜಾಣ ಕುರುಡು ಎನ್ನಬೇಕೋ ತಿಳಿಯುದಿಲ್ಲ. ತಮಗೂ ಈ ಅನುಭವ ಆಗೇ ಇರುತ್ತೆ ಅಂದುಕೊಂಡಿದ್ದೇನೆ.
ಈಗ ನೀವೇ ಹೇಳಿ : ಅಳುವುದೊ ನಗುವುದೊ ?

ReplyDeleteಉತ್ತರ: ಕೊನೆ ಕಾಳಗದಲ್ಲಿ
ಒಂದು ನಿಮಿಷ ಇದು ನಿಜ ಜೀವನದ ಪ್ರಶ್ನೆ ಎಂದುಕೊಳ್ಳಿ. ನೀವು ಯಾರಿಗೋ ಕೇಳುತ್ತೀರಿ. ಆಗ ಈ ಉತ್ತರ ಕೊಟ್ಟರು ಎಂದುಕೊಳ್ಳಿ. ನಿಮ್ಮ ಉದ್ದೇಶಿತ ಸರಿಯಾದ ಮತ್ತು ಪೂರ್ಣ ಉತ್ತರ ೧೭೯೯ ರ ಶ್ರೀರಂಗಪಟ್ಟಣದ ಯುದ್ದ ಅಥವಾ ನಾಲ್ಕನೇ ಆಂಗ್ಲೊ-ಮೈಸೂರ ಯುದ್ದ. ಆದರೆ ಕೊಟ್ಟ ಉತ್ತರವನ್ನು ತಪ್ಪು ಎನ್ನಲಾಗದು. ಅದು ನಿಜವಾಗಿಯೂ ಟಿಪ್ಪುವಿನ ಕೊನೆ ಯುದ್ದ ಹಾಗೂ ಅದರಲ್ಲೇ ಆತ ಮಡಿದದ್ದು ಕೂಡ. ಈ ಉತ್ತರ ಕೊಟ್ಟ ವ್ಯಕ್ತಿ ನಿಜವಾಗಿಯೂ ಮುಗ್ಧನಾಗಿರಬಹುದು ಅಥವಾ ಉತ್ತರ ಗೊತ್ತಿರದಿದ್ದನ್ನು ಮರೆಮಾಚಲು ಈ ಜಾಣ ಕುರುಡು ಉತ್ತರ ಕೊಟ್ಟಿರಬಹುದು. ಆಗ ಅದನ್ನು ತಿಳಿಯಲು ನೀವು ಈ ಹೆಚ್ಚಿನ ಪ್ರಶ್ನೆ ಕೇಳಬೇಕು, ಆ ಕೊನೆ ಕಾಳಗ ಎಲ್ಲಿಹಾಗೂ ಯಾವಾಗ ನಡೆಯಿತು.
ಇಲ್ಲೇನೋ ವಿಷಯ ಸುಲಭ ಹಾಗೂ ತಿಳಿದ ವಿಷಯ ಆದ್ದರಿಂದ ಹೆಚ್ಚಿನ ಪ್ರಶ್ನೆಗಳ ಮೊಲಕ ಉತ್ತರ ಪಡೆಯಬಹುದು. ಆದರೆ ವಿಷಯ ಜಟಿಲವಾಗಿದ್ದಾಗ ಹಾಗೂಇನ್ನೂ ತಿಳಿಯಲು ಪ್ರಯತ್ನಿಸುತ್ತಿರುವಾಗ ಈ ತರಹ ಸರಿಎನ್ನಿಸಿದರೂ ನಿರ್ದೇಶಿತ ಕೊನೆ ತಲುಪದ ಆದರೂ ಸುಳ್ಳು ಕೊನೆ ತಲುಪಿದ ಆನಂದ ತಂದು ಕೊಡುವ ಈ ಉತ್ತರಗಳು ಮಹಾ ಅಪಾಯಕಾರಿ.
ಸರಿಯಾದ ಪ್ರಶ್ನೆಯ ಆಯ್ಕೆ ಹಾಗೂ ಸಂದರ್ಭವನ್ನು ಅರಿತು ಉತ್ತರ ಕೊಡುವದರಿಂದ ಈ ದುರಂತ ತಪ್ಪಿಸಬಹುದಾದರೂ ಬಹುಪಾಲು ಜನರಿಗೆ ಇದರ ತಿಳುವಳಿಕೆ ಇರುವದಿಲ್ಲ.