Total Pageviews

Showing posts with label Collection. Show all posts
Showing posts with label Collection. Show all posts

Sunday, July 17, 2011

ನನ್ನ ತೇಜಸ್ವಿ - ೧

ರಾಜೇಶ್ವರಿ ತೇಜಸ್ವಿ ಅವರ "ನನ್ನ ತೇಜಸ್ವಿ" ಓದುತ್ತಾ ಇದ್ದೇ[೧೭೪/೫೮೪ ಪುಟ ಓದಿದೆದ್ದೇನೆ]. ತೇಜಸ್ವಿ ಅವರ ಸ್ವಂತಿಕೆ ಅವರ ೨೪ರ ಯುವ ವಯಸ್ಸಿನಲ್ಲೇ ತುಂಬಾ ಗಾಢವಾಗಿ ಹೊರ ಹೊಮ್ಮಿದೆ. ಅವರ ಆ ಸ್ವಾಭಾವಿಕ ಹಾಗೂ ಪಾರದರ್ಶಕ ನಡವಳಿಕೆ ಅವರ ಅಗಾಧವಾದ ತಿಳಿವಳಿಕೆ ಹಾಗೂ ಧೈರ್ಯವನ್ನು ತೋರುತ್ತದೆ. ಇದು ಅವರಿಗೆ ಜೀವನದ ಬಗ್ಗೆ ಇದ್ದ ಪ್ರೀತಿಯ ಪ್ರತೀಕ ಕೂಡ ಹೌದು.  ತೇಜಸ್ವಿಯವರ ಆತ್ಮವಿಶ್ವಾಸ, ಗಟ್ಟಿಧೋರಣೆ ಹಾಗೂ ಸಟೆದು ನಿಲ್ಲುವ ಶಕ್ತಿ ಅಗಾಧವಾಗಿತ್ತು.


ನನಗೆ ಹಿಡಿಸಿದ ತೇಜಸ್ವೀಯ ವಿವಿಧ ಧೋರಣೆಗಳು:

ತೇಜಸ್ವಿ ತಮ್ಮ ಭಾವಿ ಪತ್ನಿ ರಾಜೇಶ್ವರಿ ಅವರಿಗೆ ಬರೆದ ಪತ್ರದ ಒಂದು ಸಾಲು ತುಂಬಾ ಹಿಡಿಸಿತು. "ನನ್ನ ಜೀವನದ ಸರ್ವಕ್ಷೇತ್ರಗಳನ್ನು ಆವರಿಸುವಂತ ಯೌವುದೂ ಅದು Love ಆಗಲಿ Literature ಆಗಲಿ ಅಥವಾ Music ಆಗಿರಲಿ ಅದು ನನಗೆ ಬೇಡ."

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಂಕರ  ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವದಿಲ್ಲ. ಸ್ವಾತಂತ್ರ್ಯ ತೇಜಸ್ವಿಗೇ ಪ್ರಾಣ ಪ್ರಿಯ.

ಮೈಸೂರು ತೇಜಸ್ವಿಗೇ ಹಿಡಿಸಿರಲಿಲ್ಲ. ರಾಜೇಶ್ವರಿಯವರು ಒಮ್ಮೆ ನೀವು ಮೈಸೂರಲ್ಲಿ ಮೇಸ್ಟ್ರಾಗಬಾರ್ದ ಅಂತ ಕೇಳಿದಕ್ಕೆ ತೇಜಸ್ವಿ ನಾನು ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ. ಆದರೆ ಈ ಹಲವು ನನ್ನ ಮೂಲಭೂತ ಅಂಶಗಳನ್ನು ಆಲೋಚನಾ ಪ್ರವಾಹದ ದಿಕ್ಕನ್ನು ಬದಲಿಸಲು ಯತ್ನಿಸಿದರೆ ನನಗೆ ನೀನು ಬೇಡ ಯಾರು ಬೇಡ. ಗೊತ್ತಾಯಿತೊ? ಅಂದಿದ್ದರು

ನನ್ನ ವ್ಯಕ್ತಿತ್ವ ಇಷ್ಟೊಂದು ರಂಜಕವಾಗಿ colorful ಆಗಿರೋದೇ ನನ್ನ ಆತ್ಮಭಿಮಾನದ ಮುಖಾಂತರ, ಅನ್ನುವ ದಿಟ್ಟತನ ಹೊಂದಿದ್ದರು.

ತೇಜಸ್ವಿ ತಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ತೋಟ ಮಾಡಿ ಜೀವಿಸುವ ನಿರ್ಧಾರಕ್ಕೆ ಬಂದಿದ್ದರು. ಮನುಷ್ಯನ ಮೂಲಭೂತ ಅವಲಂಬನೆ ಪ್ರಕೃತಿ ಮೇಲೆ ಅಸ್ಟೆ ಇದ್ದಾಗ ತಾನೇ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಧ್ಯ. ಎಂತಹ ಸುಂದರ ನಿರ್ಧಾರ.

Fashion ಒಂದು ಕಡೆ ಬದುಕುವ ಉತ್ಸಾಹ ಗೊತ್ತಾ. ಯೌವನವೇ ಅದು. ಏನು ಬೇಕಾದರೂ ಮಾಡು ಒಂದು ಜೀವನೋತ್ಸಾಹದಿಂದ ಮಾಡು. ಕಾವಿ ಬಟ್ಟೆ ಬೇಕಾದರೂ ಅದಮ್ಯ ಉತ್ಸಾಹದಿಂದ ಉಟ್ಟೋಕೋ. ಆದರೆ ನಿಸ್ಸಾರತೆಯಿಂದ ಜೀವನದ ಬಗ್ಗೆ ನಿರುತ್ಸಾಹದಿಂದ ಬದುಕಿದ್ದಾಗಲೇ ಸಾವಿನ ದಾಸರಾಗೋದು ಬೇಡ.

ಸ್ವದೇಶ ಚಿತ್ರದ ನಾಯಕನಿಗೆ ಮಾದರಿ ಆಗುವಂತೆ ೧೯೬೬ರಲ್ಲಿಯೆ ತಮ್ಮ ಚಿತ್ರಕೂಟ ಮನೆಯಲ್ಲಿ Hydraulic Ram pump ನಿರ್ಮಿಸಿಕೊಂಡ ಎದೆಗಾರಿಕೆ ತೇಜಸ್ವಿಯರದು.

ಹ್ಯಾಟ್ಸ್ ಆಫ್, ಸರ್ !

ಮುಂದುವರೆಯುವದು ..


ಅಲ್ಲಿಯವರೆಗೆ : http://www.tejaswivismaya.com/