Total Pageviews

Showing posts with label ಅಧ್ಯಾತ್ಮ. Show all posts
Showing posts with label ಅಧ್ಯಾತ್ಮ. Show all posts

Sunday, October 9, 2011

ಸೃಷ್ಟಿ


1. ಪಂಚಭೂತದಲ್ಲಿ ಲೀನ ವಾಗಿ ಮತ್ತದೇ ಪಂಚಭೂತಗಳಿಂದಾದ ಶರೀರವಿದು. ಭಗವಂತನ ಲೀಲೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ?

2. ಭಗವಂತ ತನ್ನ ಸಂಕಲ್ಪ ಮಾತ್ರದಿಂದಲೇ ಜನನ ಮಾಡಬಹುದು. ಹಾಗೆ ಮಾಡಿ ತಂದೆ ತಾಯಿಯ ಮನಸ್ಸಿನಲ್ಲಿ ಪ್ರೀತಿ ಹುಟ್ಟುವ ಹಾಗೆ ಪ್ರೇರೇಪಣೆ ಮಾಡಬಹುದಾಗಿತ್ತು. ಏಕೆ ಹಾಗೆ ಮಾಡಿಲ್ಲ ? ಯಾಕೀ ಜೀವನ ಚಕ್ರ ?

3. ಹುಟ್ಟಿನ ಮೂಲಕ ಜೀವಗಳಿಗೆ ಕರ್ತೃತ್ವ ಭಾವನೆ ಬರುವಂತೆ ಮಾಡುತ್ತಾನೆ ಆ ಭಗವಂತ.

4. ಮಳೆ ನೀರಿನ ಮೂಲಕ ಜೀವ ಭೂಮಿಗೆ ಬಂದು ಬೆಳೆಯಲ್ಲಿ ಬೆರತು ತಂದೆ ತಾಯಿಯ ದೇಹ ಸೇರಿ, ನಂತರ ಜೀವದ ದೇಹ ಉತ್ಪತ್ತಿಗೆ ಕಾರಣವಾಗುತ್ತದೆ.

5. ತಂದೆ ತಾಯಿಗೆ ಆ ಯಾವದೋ ಒಂದು ಜೀವಿಯ ಮೇಲೆ ಹುಟ್ಟಿನ ಮೂಲಕ ವ್ಯಾಮೋಹ ಹುಟ್ಟುವಂತೆ ಮಾಡುವ ಆ ಭಗವಂತನ ಆ ಲೀಲಾ ವಿನೋದ ಮನಮೋಹಕ.

6. ಪ್ರತಿ ಹುಟ್ಟು ತಂದೆ ತಾಯಿಗೆ ಭಗವಂತ ಕೊಡುವ ಒಂದು ಜವಾಬ್ದಾರಿ. ಮುಂದಿನ ಪಾತ್ರಧಾರರ ಪಾಲನೆ ಪೋಷಣೆಯ ಜವಾಬ್ದಾರಿ.

7. ನಾಹಂ ಕರ್ತಾ ಹರಿ ಕರ್ತಾ ಎಂಬ ಭಾವದ ಮೂಲಕ ತಂದೆ ತಾಯಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು.

8. ಮಗಳಂತೂ ಗಂಡನ ಮನೆಯ ಸಂಪತ್ತು, ಬೆಳೆಯುವವರೆಗೆ ತಮ್ಮ ಕಡೆ ಇಟ್ಟು ಕೊಂಡಂತೆ ಭಾವಿಸಬೇಕು. ಅಗಲೆ ಎಲ್ಲರಿಗೂ ಶ್ರೇಯಸ್ಸು.

Friday, March 4, 2011

ಉಡುಪಿಯ ಕಂಡಿರಾ ಉಡುಪಿಯ ಕೃಷ್ಣನ ಕಂಡಿರಾ...


ಈ ವಿಷಯ ಬರೆಯಲಾಸಾಧ್ಯ. ಆದರೂ ಭಕ್ತರಿಗೆ ಉಪಯೋಗವಾಗುವ ವಿಷಯವಾದ್ದರಿಂದ ನನಗೆ ತಿಳಿದಷ್ಟು ಬರೆಯುತ್ತಿದ್ದೇನೆ.

ಉಡುಪಿ ಶ್ರೀ ಕೃಷ್ಣನಿಗೆ ಉಡುಪಿ ಶ್ರೀ ಕೃಷ್ಣನೇ ಸಾಟಿ. ಆತ ನಿಂತ ಬಗೆ ಅಖೀಲಾಂಡ ಕೋಟಿ ಬ್ರಹ್ಮಾಂಡದ ನಾಯಕ ಎಂಬ ಪದಕ್ಕೆ ಮೂರ್ತಿ ಸ್ವರೂಪ ಕೊಟ್ಟ ಹಾಗಿದೆ. ಆಚಾರ್ಯ ಮಧ್ವ ಕರಾರ್ಚಿತ್ ಉಡುಪಿಯ ಶ್ರೀ ಕೃಷ್ಣನ ಇತಿಹಾಸ ಬಲ್ಲವರಿಗೆ, ಆತನ ನೋಡುವ ಬಯಕೆ.

ಒಮ್ಮೆ ನೋಡಿದವರಿಗೆ ಪ್ರತಿದಿನ ದರ್ಶನದ ಬಯಕೆ. ಆದರೆ ಲೌಕಿಕದಲ್ಲಿ ಸಿಲುಕಿ ಪ್ರಪಂಚದ ವಿವಿದೆಡೆ ತಮ್ಮ ಕರ್ಮ ಭೂಮಿ ಕಂಡು ಕೊಂಡಿರುವರಿಗೆ ಅದು ಆಸಾಧ್ಯವಾದ ಮಾತು.

ಸಧ್ಯದ ಪರ್ಯಾಯ ನಿರ್ವಹಿಸುತ್ತಿರುವ ಅಷ್ಟ ಮಠಗಳಲ್ಲಿ ಒಂದಾದ ಶಿರೂರ್ ಮಠದ ಪ್ರಯತ್ನ ಅತ್ಯಂತ ಶ್ಲಾಘನೀಯ. ಶ್ರೀ ಶ್ರೀ ೧೦೦೮ ಲಕ್ಷ್ಮೀವರ ತೀರ್ಥರ ಮಾರ್ಗದರ್ಶನದಲ್ಲಿ ಪ್ರತಿದಿನದ ಪೂಜೆಯ ಭಾವಚಿತ್ರ ಹಾಗೂ ದೃಶ್ಯಾವಳಿಗಳು ಅಂತರಜಾಲದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಗುಣಮಟ್ಟ ಕೂಡ ಅತ್ಯುತ್ತಮವಾಗಿದೆ.

ಶಿರೂರ್ ಮಠಧ ತಂಡಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಭಕ್ತರೆಲ್ಲರೂ ಕಣ್ಣು ತುಂಬಾ ನೋಡಿ ಆನಂದಿಸಿ.  ಉಡುಪಿ ಶ್ರೀ ಕೃಷ್ಣನ ಕೃಪೆ ನಮ್ಮೆಲ್ಲರ ಮೇಲಾಗಲಿ.

ಜಾಲತಾಣ ವಿಳಾಸ : http://udupishiroormutt.in/shiroor/


|| ಶ್ರೀ ಮುಖ್ಯ ಪ್ರಾಣಾಂತರ್ಗತ ಉಡುಪಿ ಶ್ರೀ ಕೃಷ್ಣಾರ್ಪಣಮಸ್ತು ||