1. ಪಂಚಭೂತದಲ್ಲಿ ಲೀನ ವಾಗಿ ಮತ್ತದೇ ಪಂಚಭೂತಗಳಿಂದಾದ ಶರೀರವಿದು. ಭಗವಂತನ ಲೀಲೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ ?
2. ಭಗವಂತ ತನ್ನ ಸಂಕಲ್ಪ ಮಾತ್ರದಿಂದಲೇ ಜನನ ಮಾಡಬಹುದು. ಹಾಗೆ ಮಾಡಿ ತಂದೆ ತಾಯಿಯ ಮನಸ್ಸಿನಲ್ಲಿ ಪ್ರೀತಿ ಹುಟ್ಟುವ ಹಾಗೆ ಪ್ರೇರೇಪಣೆ ಮಾಡಬಹುದಾಗಿತ್ತು. ಏಕೆ ಹಾಗೆ ಮಾಡಿಲ್ಲ ? ಯಾಕೀ ಜೀವನ ಚಕ್ರ ?
3. ಹುಟ್ಟಿನ ಮೂಲಕ ಜೀವಗಳಿಗೆ ಕರ್ತೃತ್ವ ಭಾವನೆ ಬರುವಂತೆ ಮಾಡುತ್ತಾನೆ ಆ ಭಗವಂತ.
4. ಮಳೆ ನೀರಿನ ಮೂಲಕ ಜೀವ ಭೂಮಿಗೆ ಬಂದು ಬೆಳೆಯಲ್ಲಿ ಬೆರತು ತಂದೆ ತಾಯಿಯ ದೇಹ ಸೇರಿ, ನಂತರ ಜೀವದ ದೇಹ ಉತ್ಪತ್ತಿಗೆ ಕಾರಣವಾಗುತ್ತದೆ.
5. ತಂದೆ ತಾಯಿಗೆ ಆ ಯಾವದೋ ಒಂದು ಜೀವಿಯ ಮೇಲೆ ಹುಟ್ಟಿನ ಮೂಲಕ ವ್ಯಾಮೋಹ ಹುಟ್ಟುವಂತೆ ಮಾಡುವ ಆ ಭಗವಂತನ ಆ ಲೀಲಾ ವಿನೋದ ಮನಮೋಹಕ.
6. ಪ್ರತಿ ಹುಟ್ಟು ತಂದೆ ತಾಯಿಗೆ ಭಗವಂತ ಕೊಡುವ ಒಂದು ಜವಾಬ್ದಾರಿ. ಮುಂದಿನ ಪಾತ್ರಧಾರರ ಪಾಲನೆ ಪೋಷಣೆಯ ಜವಾಬ್ದಾರಿ.
7. ನಾಹಂ ಕರ್ತಾ ಹರಿ ಕರ್ತಾ ಎಂಬ ಭಾವದ ಮೂಲಕ ತಂದೆ ತಾಯಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು.
8. ಮಗಳಂತೂ ಗಂಡನ ಮನೆಯ ಸಂಪತ್ತು, ಬೆಳೆಯುವವರೆಗೆ ತಮ್ಮ ಕಡೆ ಇಟ್ಟು ಕೊಂಡಂತೆ ಭಾವಿಸಬೇಕು. ಅಗಲೆ ಎಲ್ಲರಿಗೂ ಶ್ರೇಯಸ್ಸು.